ಕಂಪ್ಯೂಟರ್ಗೆ ಸಂಸ್ಕೃತವನ್ನು ಕಂಡರೆ ಪ್ರೀತಿ ಅದೇಕೆ ಗೊತ್ತಾ?

Importance of Sanskrit!

ನೆಲದ ಮಾತು

ನಮ್ಮದೆನ್ನುವ ವಿಚಾರಗಳ ಮೇಲೆ ನಾವು ಅಸಡ್ಡೆ ತೋರಿದರೆ ಬೇರೆಯವರು ಅದನ್ನು ಏಕಾದರೂ ಒಪ್ಪಬೇಕು? ಹಾಗಂತ ಕುರುಡು ಅಭಿಮಾನವೂ ಬೇಕಿಲ್ಲ. ಭಾರತೀಯವಾದುದರ ಎಲ್ಲದರ ಹಿಂದೆಯೂ ಇರುವ ದೂರದೃಷ್ಟಿ, ವೈಜ್ಞಾನಿಕ ಅಭಿಪ್ರಾಯ, ಕಾಳಜಿ ಇವೆಲ್ಲವನ್ನೂ ತಿಳಿದೇ ಅನುಮೋದಿಸೋಣ. ಸುಖಾಸುಮ್ಮನೆ ಜರಿಯುವುದಕ್ಕೇನೂ ಹಾದಿಗೊಬ್ಬರು, ಬೀದಿಗೊಬ್ಬರು ಸಿಗುತ್ತಾರೆ. ನಾವಾದರೂ ಅರಿತು ಆಚರಿಸೋಣ.

27fr_Panini_jpg_2361051f

ಕೆಲವರಿರುತ್ತಾರೆ. ಪ್ರಸ್ಥಾಪಿತ ಸತ್ಯವನ್ನು ಧಿಕ್ಕರಿಸಿಯೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅವರಿಗೆ ಸಮಷ್ಟಿಯ ವಿಕಾಸ ಬೇಕಿಲ್ಲ, ತಮ್ಮ ಬೆಳವಣ ಗೆ ಆದರೆ ಸಾಕು. ಇಂಥವರನ್ನೇ ಬಹುಶಃ ಬುದ್ಧಿ ಜೀವಿಗಳೆನ್ನುತ್ತಾರೇನೋ? ಇವರಲ್ಲಿ ಕಾವಿಧಾರಿಯಾದ ಕೆಲವು ಸಂತರೂ ಇದ್ದಾರೆಂಬುದೇ ಆಘಾತಕಾರಿ. ಅವರು ಪೀಠಗಳನ್ನು ಶೋಷಣೆಯೆಂದು ಜರಿಯುತ್ತಾರೆ, ತಾವು ಜನರನ್ನು ಕಾಲಿಗೆ ಬೀಳಿಸಿಕೊಳ್ಳುತ್ತಾರೆ; ಅಡ್ಡ ಪಲ್ಲಕ್ಕಿ ಬೇಡವೆನ್ನುತ್ತಾರೆ, ಹೆಲಿಕಾಪ್ಟರುಗಳಿಂದ ಪುಷ್ಪಾರ್ಚನೆ ಮಾಡಿಸಿಕೊಳ್ಳುತ್ತಾರೆ. ಎರಡೂ ಬಗೆಯೂ ಕಂಟಕವೇ. ಇಂತಹುದೇ ಸಂತರೊಬ್ಬರು ಇತ್ತೀಚೆಗೆ ಹಿಂದೂಧರ್ಮವನ್ನು ವಾಚಾಮಗೋಚರವಾಗಿ ಬೈದು ವಿಜ್ಞಾನ ಯುಗದಲ್ಲಿ ತರುಣ ಕೇಳುವ ಪ್ರಶ್ನೆಗೆ ಉತ್ತರಿಸಲಾರಿರಿ ಎಂದು ಉತ್ಕಂಠದಲ್ಲಿ ಹೇಳಿದರು. ನಕ್ಕು ಸುಮ್ಮನಾಗದೇ ಬೇರೆ ದಾರಿಯೇ ಇರಲಿಲ್ಲ. ವಿಜ್ಞಾನದ ಸಂಶೋಧನೆಗಳೆಲ್ಲಾ ವೇದಾಂತಕ್ಕೆ ನತಮಸ್ತಕವಾಗುತ್ತಿರುವ ಕಾಲದಲ್ಲಿ ಇವರೆಲ್ಲ ಅದೇನನ್ನು ಗಮನಿಸುತ್ತಿದ್ದಾರೋ ದೇವರೇ ಬಲ್ಲ.

ಹೌದು. ನಾನು ಚಚರ್ಿಸಬೇಕಿರೋದು ಅಕ್ಷರಶಃ ಅದನ್ನೇ. ವೈಜ್ಞಾನಿಕ ಮನೋಭಾವ ಇಲ್ಲದ ಭಾರತೀಯನೇ ಇಲ್ಲ. ಆತನ ಊಟ, ನೋಟ, ಮಾತು ಕೊನೆಗೆ ನಿದ್ದೆಯೂ ವೈಜ್ಞಾನಿಕವೇ. ಎಲ್ಲದರ ಹಿಂದೆಯೂ ಊಹಿಸಲಸಾಧ್ಯವಾದಷ್ಟು ಅಧ್ಯಯನವಿದೆ. ಉಸಿರನ್ನು ಎಳೆದು, ಹೊರಹಾಕುವ ಸಹಜ ಕೈಂಕರ್ಯವನ್ನೂ ಪ್ರಾಣಾಯಾಮವೆಂದು ಕರೆದು ವಿಸ್ತಾರಗೊಳಿಸಿದ್ದು ಭಾರತ. ಯಾವ ಋತುವಿಗೆ ಯಾವ ಊಟ, ಯಾವ ರೋಗಕ್ಕೆ ಯಾವ ಮದ್ದು ಗೊತ್ತಿರಲಿಲ್ಲವೇನು ಅವನಿಗೆ? ಇವನ್ನೆಲ್ಲಾ ತನ್ನ ಸಾಮಥ್ರ್ಯದಿಂದ…

View original post 920 more words